Toggle navigation

ಸಂಕ್ಷಿಪ್ತ ವರದಿ

ಸಂಸ್ಥೆಯು ದ್ರಾಕ್ಷಿ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ತೋಟಗಾರಿಕೆ ಪಿತಾಮಹರು ಹಾಗೂ ಕರ್ನಾಟಕ ರಾಜ್ಯದ ಅಂದಿನ ತೋಟಗಾರಿಕೆ ಪಿತಾಮಹರು ಹಾಗೂ ಕರ್ನಾಟಕ ರಾಜ್ಯದ ಅಂದಿನ ತೋಟಗಾರಿಕೆ ನಿರ್ದೇಶಕರಾಗಿದ್ದ ದಿವಂಗತ ಡಾ||ಎಂ.ಹೆಚ್.ಮರೀಗೌಡರವರ ದೂರದೃಷ್ಟಿಯ ಫಲವಾಗಿ 1959ರಲ್ಲಿ ದ್ರಾಕ್ಷಿ ಬೆಳೆಗಾರರ ಸಹಕಾರಿ ಸಂಘವು ಸ್ಥಾಪನೆಯಾಗಿರುತ್ತದೆ. 1965ರಿಂದ ಇತರೆ ಹಣ್ಣು ತರಕಾರಿಗಳ ವಹಿವಾಟನ್ನು ಪ್ರಾರಂಭಿಸಿ 1986-87 ರಿಂದ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿ, (ಹಾಪ್ ಕಾಮ್ಸ್) ಎಂಬ ಹೆಸರಿನಿಂದ ಕಾರ್ಯನಿರ್ವಹಿಸುತ್ತದೆ. ರಾಜ್ಯದಲ್ಲಿ ತೋಟಗಾರಿಕಾ ಉತ್ಪನ್ನಗಳಿಗೆ ವ್ಯವಸ್ಥಿತ ಮಾರಾಟ ವ್ಯವಸ್ಥೆ ಇಲ್ಲದೆ ಬೆಳೆಗಾರರಿಗೆ ಮತ್ತು ಬಳಕೆದಾರರಿಗೆ ಮಧ್ಯವರ್ತಿಗಳಿಂದ ಆಗುತ್ತಿರುವ ಶೋಷಣೆಯನ್ನು ತಪ್ಪಿಸಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶದಿಂದ ಸ್ಥಾಪಿತವಾದಂತ ಈ ಸಂಸ್ಥೆಯು ತನ್ನ ಧ್ಯೇಯೋದ್ದೇಶಗಳಡಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದ್ದು, ಹಣ್ಣು-ತರಕಾರಿ ವಹಿವಾಟಿನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಮಾದರಿಯ ಕಾರ್ಯ ನಿರ್ವಹಣೆಗೆ ಖ್ಯಾತಿಗೊಂಡಿರುತ್ತದೆ.

ಪ್ರಸ್ತುತ ತೋಟಗಾರಿಕಾ ಮಹಾಮಂಡಳವು ಅಸ್ಥಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಸಂಸ್ಥೆಯ ಕಾರ್ಯವ್ಯಾಪ್ತಿಯು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂvರ. ಕೋಲಾರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಈ 5 ಜಿಲ್ಲೆಗಳಿಗೆ ಸೀಮಿತಗೊಂಡಿರುತ್ತದೆ.

Important Updates

HOPCOMS, that runs in five districts, including Bengaluru Urban, Bengaluru Rural, Kolar, Chikkaballapur and Ramanagara has 325 outlets.

Employee Seniority list has been Inserted

Contact Us

Horticultural Producers Co-operative Marketing and Processing Society Limited (HOPCOMS)

Lalbagh, Bangalore – 560004 Tel.: 080- 26577552 / 080-26572832 Fax: 26579017